ಅನ್ನಮಯ್ಯ ಕೀರ್ತನ ತ್ವಮೇವ ಶರಣಂ
ತ್ವಮೇವ ಶರಣಂ ತ್ವಮೇವ ಶರಣಂ ಕಮಲೋದರ ಶ್ರೀಜಗನ್ನಾಥಾ ॥
ವಾಸುದೇವ ಕೃಷ್ಣ ವಾಮನ ನರಸಿಂಹ ಶ್ರೀ ಸತೀಶ ಸರಸಿಜನೇತ್ರಾ ।ಭೂಸುರವಲ್ಲಭ ಪುರುಷೋತ್ತಮ ಪೀತ- ಕೌಶೇಯವಸನ ಜಗನ್ನಾಥಾ ॥
ಬಲಭದ್ರಾನುಜ ಪರಮಪುರುಷ ದುಗ್ಧ ಜಲಧಿವಿಹಾರ ಕುಂಜರವರದ ।ಸುಲಭ ಸುಭದ್ರಾ ಸುಮುಖ ಸುರೇಶ್ವರ ಕಲಿದೋಷಹರಣ ಜಗನ್ನಾಥಾ ॥
ವಟಪತ್ರಶಯನ ಭುವನಪಾಲನ ಜಂತು- ಘಟಕಾರಕರಣ ಶೃಂಗಾರಾಧಿಪಾ ।ಪಟುತರ ನಿತ್ಯವೈಭವರಾಯ ತಿರುವೇಂಕಟಗಿರಿನಿಲಯ ಜಗನ್ನಾಥಾ ॥
Browse Related Categories: